Ad

ವೃದ್ಧೆಯ ಮೇಲೆ ಹರಿದ ಕೆಎಸ್ಆರ್​​ಟಿಸಿ ಬಸ್ : ಸ್ಥಳದಲ್ಲೇ ಮೃತ್ಯು

ರಸ್ತೆ ದಾಟುತ್ತಿದ್ದ ವೃದ್ಧೆಯ ಮೇಲೆ ಕೆಎಸ್ಆರ್​​ಟಿಸಿ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಂಜನಗೂಡಿನ ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

ಮೈಸೂರು: ರಸ್ತೆ ದಾಟುತ್ತಿದ್ದ ವೃದ್ಧೆಯ ಮೇಲೆ ಕೆಎಸ್ಆರ್​​ಟಿಸಿ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಂಜನಗೂಡಿನ ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

Ad
300x250 2

ನಂಜನಗೂಡಿನ ಮೇದಾರ ಬೀದಿ ನಿವಾಸಿ ಪಾರ್ವತಮ್ಮ (75) ಮೃತ ದುರ್ದೈವಿ. ಇವರು ಚಾಮರಾಜನಗರ ಬೈಪಾಸ್ ರಸ್ತೆಯನ್ನು ದಾಟುತ್ತಿದ್ದರು. ಇದೇ ವೇಳೆ ಅದೇ ರಸ್ತೆಯಲ್ಲಿ ಚಾಮರಾಜನಗರ ಕಡೆಯಿಂದ ಬರುತ್ತಿದ್ದ ಕೆಎಸ್ಆರ್​​ಟಿಸಿ ಬಸ್ ವೃದ್ಧೆಯ ಮೇಲೆ ಹರಿದಿದೆ.

ಘಟನೆಯ ಪರಿಣಾಮ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ನಂಜನಗೂಡು ಸಂಚಾರಿ ಪೊಲೀಸರ ಭೇಟಿ ನೀಡಿದ್ದಾರೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad
Ad
Nk Channel Final 21 09 2023
Ad