Bengaluru 23°C
Ad

20 ದಿನ ಹೊಟೆಲ್‌ನಲ್ಲಿ ಕೂಡಿ ಹಾಕಿದ ಆನ್‌ಲೈನ್ ಗೆಳೆಯ

ಕಳೆದ 20 ದಿನಗಳಿಂದ ಹೋಟೆಲ್​ ರೂಂನಲ್ಲಿ ಬಂಧಿಯಾಗಿದ್ದ ವಿದ್ಯಾರ್ಥಿನಿಯನ್ನು ಹೈದರಾಬಾದ್​ನ ಮಹಿಳಾ ಪೊಲೀಸರು ರಕ್ಷಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆಕೆಯನ್ನು ಕರೆದೊಯ್ದು ರೂಮಿನಲ್ಲಿ ಬಂಧಿಸಿಟ್ಟಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಹೈದರಾಬಾದ್​ : ಕಳೆದ 20 ದಿನಗಳಿಂದ ಹೋಟೆಲ್​ ರೂಂನಲ್ಲಿ ಬಂಧಿಯಾಗಿದ್ದ ವಿದ್ಯಾರ್ಥಿನಿಯನ್ನು ಹೈದರಾಬಾದ್​ನ ಮಹಿಳಾ ಪೊಲೀಸರು ರಕ್ಷಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆಕೆಯನ್ನು ಕರೆದೊಯ್ದು ರೂಮಿನಲ್ಲಿ ಬಂಧಿಸಿಟ್ಟಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

18 ವರ್ಷದ ವಿದ್ಯಾರ್ಥಿನಿಗೆ ಆನ್‌ಲೈನ್ ಮೂಲಕ 19ರ ಹರೆಯದ ಯುವಕನ ಪರಿಚಯವಾಗಿದೆ. ಗೆಳೆತನ ಶುರುವಾಗಿದೆ. ಆದರೆ ಆತನ ಬೇಡಿಕೆ, ಮಾತಗಳು, ಡಬಲ್ ಮೀನಿಂಗ್ ಸಂದೇಶಕ್ಕೆ ರೋಸಿ ಹೋದ ಯುವತಿ ಫ್ರೆಂಡ್‌ಶಿಪ್ ಕಟ್ ಮಾಡಿದ್ದಾಳೆ. ಇದರಿಂದ ರೊಚ್ಚಿಗೆದ್ದ ಯುವಕ, ಆಕೆಯನ್ನು ಹೈದರಾಬಾದ್‌ಗೆ ಕರೆಯಿಸಿಕೊಂಡು ಹೊಟೆಲ್ ರೂಂನಲ್ಲಿ ಕೂಡಿ ಹಾಕಿದ್ದಾರೆ. ಬರೋಬ್ಬರಿ 20 ದಿನ ಹೊಟೆಲ್ ರೂಂನಲ್ಲಿ ಕೂಡಿ ಹಾಕಿದ್ದಾನೆ. ಹೈದರಾಬಾದ್ ಪೊಲೀಸ್ ವಿಭಾಗ She(ಶಿ) ಟೀಂ ಕಾರ್ಯಾಚರಣೆಯಿಂದ ಯುವತಿಯನ್ನು ರಕ್ಷಿಸಲಾಗಿದ್ದು, ಯುವಕನ ಬಂಧಿಸಲಾಗಿದೆ.

Ad
Ad
Nk Channel Final 21 09 2023