Ad

10 ಮಂದಿಯಿಂದ ಸಾಮೂಹಿಕ ಅತ್ಯಾಚಾರ; ಗರ್ಭಿಣಿಯಾದ ಅಪ್ರಾಪ್ತೆ !

Rape

ಹೈದರಾಬಾದ್​: ಹೈದರಾಬಾದ್‌ನಲ್ಲಿ 10 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇಲೆ 10 ಜನರನ್ನು ಬಂಧಿಸಲಾಗಿದೆ. ಆರೋಪಿಗಳು ಅಪರಾಧ ಮಾಡುವ ಮೊದಲು ಆಕೆಗೆ ಮಾದಕವಸ್ತು ಮಿಶ್ರಿತ ಪಾನೀಯಗಳನ್ನು ಸೇವಿಸುವಂತೆ ಒತ್ತಾಯಿಸಿದ್ದರು. ಈ ಅತ್ಯಾಚಾರದ ಘಟನೆಯ ನಂತರ ಆಕೆ ಗರ್ಭಿಣಿಯಾಗಿದ್ದಾಳೆ. ಈ ಹಿನ್ನೆಲೆಯಲ್ಲಿ 10 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

Ad
300x250 2

4ನೇ ತರಗತಿ ಬಾಲಕಿಯ ಜೊತೆ ಜೂನ್ 25ರಂದು ನಗರದ ಕಾಚಿಗುಡಾ ಪ್ರದೇಶದಿಂದ ನರೇಶ್ ಮತ್ತು ವಿಜಯ್ ಕುಮಾರ್ ಎಂಬುವರು ಸಾಮಾನ್ಯ ಸ್ನೇಹಿತನ ಮೂಲಕ ಸ್ನೇಹ ಬೆಳೆಸಿದ್ದರು. ಅವರು ತಮ್ಮ ಇತರೆ ಗೆಳೆಯರ ಜೊತೆ ಸೇರಿ ಆ ಅಪ್ರಾಪ್ತ ಬಾಲಕಿಯ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದರು. ಅಲ್ಲದೆ, ಮಾದಕವಸ್ತು ತುಂಬಿದ ಪಾನೀಯಗಳನ್ನು ಸೇವಿಸುವಂತೆ ಒತ್ತಾಯಿಸಿ, ಕುಡಿಸಿದ್ದರು. ನಿರಂತರವಾಗಿ ಅತ್ಯಾಚಾರ ನಡೆಸಿದ್ದರಿಂದ ಆ ಬಾಲಕಿ ಗರ್ಭಿಣಿಯಾಗಿದ್ದಾಳೆ.

ಇನ್ನು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad