Bengaluru 24°C
Ad

ಕಥೊಲಿಕ್ ಶಿಕ್ಷಣ ಮಂಡಳಿ (ರಿ) ಯಿಂದ ಫಾ| ಆಂಟನಿ ಮೈಕಲ್ ಶೇರಾಗೆ ಹೃದಯ ಸ್ಪರ್ಶಿ ವಿದಾಯ

Catholic

ಮಂಗಳೂರು: 2018 ರಿಂದ 2024 ರವರೆಗೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ವಂದನೀಯ ಫಾದರ್ ಆಂಟನಿ ಮೈಕಲ್ ಶೇರಾ ಅವರಿಗೆ ಮಂಗಳೂರು ಧರ್ಮಪ್ರಾಂತ್ಯದ ಕಥೊಲಿಕ್ ಶಿಕ್ಷಣ ಮಂಡಳಿ (CBE) ವತಿಯಿಂದ ಸನ್ಮಾನ ಮತ್ತು ಬೀಳ್ಕೊಡುಗೆ ಕಾರ್ಯಕ್ರಮವು ಜೂನ್ 11, ರಂದು ನಗರದ ಬಜ್ಜೋಡಿ, ಶಾಂತಿ ಕಿರಣ್ ಸಭಾಂಗಣದಲ್ಲಿ ನಡೆಯಿತು.

Ad
300x250 2

Catholic (1)

ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮತ್ತು CBE ಯ ಉಪಾಧ್ಯಕ್ಷರಾದ ಅತೀ ವಂದನೀಯ ಮೊನ್ಸಿಂಜೊರ್ ಮ್ಯಾಕ್ಸಿಮ್ ಎಲ್. ನೊರೊನ್ಹಾರವರು ವಹಿಸಿದ್ದರು.. ಗೌರವಾನ್ವಿತ ಅತಿಥಿಗಳಾಗಿ CBE ಯ ಪ್ರಸ್ತುತ ಕಾರ್ಯದರ್ಶಿ ರೆ.ಫಾ. ಪ್ರವೀಣ್ ಲಿಯೋ ಲಸ್ರಾದೊ, ಶಾಂತಿ ಕಿರಣ್ ಪಾಲಾನಾ ಕೇಂದ್ರದ ನಿರ್ದೇಶಕರಾದ್ ವಂದನೀಯ .ಸಂತೋಷ್ ಡಿಸೋಜಾ, ವಂದನಿಯ ಮೊನ್ಸಿಂಜೊರ್ ಲೆಸ್ಲಿ ಶೆಣೈ, ಮತ್ತು ಉಡುಪಿ ಧರ್ಮಪ್ರಾಂತ್ಯದ ಶಿಕ್ಷಣ ಕಾರ್ಯದರ್ಶಿ ರೆ.ಫಾ ವಿನ್ಸೆಂಟ್ ರಾಬರ್ಟ್ ಕ್ರಾಸ್ತಾ ಉಪಸ್ಥಿತರಿದ್ದರು.

Catholic (2)

ಕಾರ್ಯಕ್ರಮದಲ್ಲಿ CBE ಆಡಳಿತ ಮಂಡಳಿಯ ಸದಸ್ಯರು, ಸಂಸ್ಥೆಗಳ ಮುಖ್ಯಸ್ಥರು, CBE-ಆಡಳಿತ ಶಾಲೆಗಳು ಮತ್ತು ಕಾಲೇಜುಗಳ ಶಿಕ್ಷಕರು, ಸಿಬ್ಬಂದಿ ವರ್ಗದವರು, ಧಾರ್ಮಿಕ ಸಹೋದರಿಯರು ಮತ್ತು ಧರ್ಮಪ್ರಾಂತ್ಯದ ಆಯೋಗಗಳ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
Catholic (3)

ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟೋನಿ ಪ್ರಕಾಶ್ ಮೊಂತೇರೊ ಅವರು ಫಾ| ಶೇರಾ ಅವರಿಗೆ ಅಭಿನಂದನಾ ನುಡಿಗಳನ್ನಾಡಿದರೆ, ಮಂಗಳೂರಿನ ಉರ್ವದಲ್ಲಿರುವ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಅಲೋಶಿಯಸ್ ಡಿಸೋಜಾ ಅವರು ಸನ್ಮಾನ ಪತ್ರ ವಾಚಿಸಿದರು. ಫಾದರ್ ಶೇರಾ ಅವರನ್ನು ಗಣ್ಯರು ಹಾಗೂ ಆಡಳಿತ ಮಂಡಳಿ ಸದಸ್ಯರು ಶಾಲು ಹೊದಿಸಿ, ಹೂವಿನ ಹಾರ, ಪೇಟಾ, ಸ್ಮರಣಿಕೆ, ಫಲ ನೀಡಿ ಗೌರವಿಸಿದರು.
Catholic (4)

Fr ಶೇರಾ ಅವರು ತಮ್ಮ ಪ್ರತಿಕ್ರಿಯ ಭಾಷಣದಲ್ಲಿ, ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ, “ನಾನು ಏನು ಮಾಡಿದ್ದೇನೆ ಅದು ದೇವರ ಅನುಗ್ರಹದಿಂದ ಮತ್ತು ನನ್ನ ಎಲ್ಲಾ ಸಹಯೋಗಿಗಳ ಬೆಂಬಲದಿಂದ. ಕೋವಿಡ್ ನಂತರದ ಸಮಯದಲ್ಲಿ ಮತ್ತು ಹೊಸ ಶಿಕ್ಷಣ ನೀತಿಯ ಆಗಮನದಿಂದ CBE ಯ ಪ್ರಯಾಣ ಸುಲಭವವಾಗಿರಲಿಲ್ಲ.” ಅವರು ತಮ್ಮ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಪ್ರಸ್ತುತ ಕಾರ್ಯದರ್ಶಿ ವಂ|. ಡಾ. ಪ್ರವೀಣ್ ಲಿಯೋ ಲಾಸ್ರಾದೊ ಅವರಿಗೆ ಶುಭ ಹಾರೈಸಿದರು.

Catholic (5)

ಎಲ್ಲಾ ಶಾಲೆಗಳ ಪ್ರಗತಿ ಮತ್ತು ದಾಖಲಾತಿಗಳನ್ನು ಪತ್ತೆಹಚ್ಚಲು ಇಆರ್‌ಪಿ ಆನ್‌ಲೈನ್ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು ಫ್ರಾ ಶೇರಾ ಅವರ ಅಧಿಕಾರಾವಧಿಯಲ್ಲಿ ಗಮನಾರ್ಹ ಸಾಧನೆಗಳಲ್ಲಿ ಒಂದಾಗಿದೆ. ಈ ಉಪಕ್ರಮವು CBE ಯ ಶೈಕ್ಷಣಿಕ ನಿರ್ವಹಣೆಯ ಆಧುನೀಕರಣದಲ್ಲಿ ಮಹತ್ವದ ಹೆಜ್ಜೆಯನ್ನು ಗುರುತಿಸಿದೆ. ERP ಅಪ್ಲಿಕೇಶನ್, ಈ ಹಿಂದೆ ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಿತ್ತು, ಈಗ ಆದರ ಮೊಬಾಯ್ಲ್ ಆಪ್ ಆವೃತ್ತಿಯನ್ನು Msgr ಮ್ಯಾಕ್ಸಿಮ್ ನೊರೊನ್ಹಾ ಅವರು ಅಧಿಕೃತವಾಗಿ ಬಿಡುಗಡೆ ಮಾಡಿದರು.
Catholic (6)

Msgr ಮ್ಯಾಕ್ಸಿಮ್ ನೊರೊನ್ಹಾ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಥೊಲಿಕ್ ಶಿಕ್ಷಣ ಮಂಡಳಿಯ ಸಾಧನೆಗಳನ್ನು ಶ್ಲಾಘಿಸುತ್ತಾ, “ಸಿಬಿಇ ಒಂದು ಆಲದ ಮರದಂತೆ, ದೊಡ್ಡದಾಗಿ ಬೆಳೆದು, ಕೆನರಾ ಮತ್ತು ಉಡುಪಿಯಲ್ಲಿ ದೀರ್ಘ ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ.” ಎಂದು ಹೇಳಿದರು. ಫಾದರ್ ಶೇರಾ ಅವರ ಆಡಳಿತ ನಾಯಕತ್ವ, ದೂರದೃಷ್ಟಿಯ ಚಿಂತನೆಗಳು ಮತ್ತು ಸಮರ್ಪಿತ ಸೇವೆಯನ್ನು ಶ್ಲಾಘಿಸಿದ ಅವರು, ಧರ್ಮಪ್ರಾಂತ್ಯದ ಬಿಷಪ್ ಮತ್ತು ಆಡಳಿತ ಮಂಡಳಿಯ ಸದಸ್ಯರ ಪರವಾಗಿ ಅವರಿಗೆ ಶುಭ ಹಾರೈಸಿದರು.
Catholic (7)

ಕಾರ್ಯಕ್ರಮದಲ್ಲಿ CBE ಯ ಕಾರ್ಯದರ್ಶಿ ರೆ.ಫಾ.ಲಿಯೋ ಲಸ್ರಾದೊ ಸ್ವಾಗತಿಸಿದರು. ಜೆಪ್ಪುವಿನ ಕಾಸ್ಸಿಯಾ ಸಂತ ರೀಟಾ ಶಾಲಾ ಮಕ್ಕಳಿಂದ ಪ್ರಾರ್ಥನಾ ಗೀತೆ ಮತ್ತು ಬಿಜೈನ ಲೂರ್ಡ್ಸ್ ಸೆಂಟ್ರಲ್ ಶಾಲೆಯಿಂದ ಅಭಿನಂದನಾ ಗೀತೆ ನಡೆಯಿತು.
Catholic (8)

CBE ಆಡಳಿತ ಮಂಡಳಿಯ ಸದಸ್ಯರಾದ ಡಾ. ರಾಜನ್ ವಿ.ಎನ್ ಧನ್ಯವಾದವನ್ನು ಸಮರ್ಪಿಸಿದರು ಮತ್ತು ಆಡಳಿತ ಮಂಡಳಿಯ ಸದಸ್ಯರಾದ ಮತ್ತು ಪದುವ ಕಾಲೇಜಿನ ಉಪ ಪ್ರಾಂಶುಪಾಲರು ಶ್ರೀ ರೋಶನ್ ಸಾಂತುಮಾಯೋರ್ ಕಾರ್ಯಕ್ರಮ ನಿರ್ವಹಿಸಿದರು.

Ad
Ad
Nk Channel Final 21 09 2023
Ad