ಕ್ಯಾಂಪಸ್

ಉಜಿರೆ: ಮತದಾರರ ನೋಂದಣಿ ಅಭಿಯಾನ ಮಾಹಿತಿ ಕಾರ್ಯಕ್ರಮ

ಉಜಿರೆ: ಮತದಾನವೆಂಬುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಹಕ್ಕಾದರೆ ಅದನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಚುನಾವಣಾ ತರಬೇತುದಾರ, ಕನ್ನಡ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಸಹಶಿಕ್ಷಕ ಧರಣೇಂದ್ರ ಕೆ.ಹೇಳಿದರು.

ಉಜಿರೆ ಶ್ರೀ ಧ. ಮಂ ಕಾಲೇಜು ಇಲ್ಲಿ ವಿದ್ಯಾರ್ಥಿ ಕ್ಷೇಮಪಾಲನೆ ಹಾಗೂ ಶಿಸ್ತಿನ ಸಮಿತಿ ಆಶ್ರಯದಲ್ಲಿ ದ.ಕ ಜಿಲ್ಲಾ ಕಂದಾಯ ಇಲಾಖೆಯು ಆಯೋಜಿಸಿದ್ದ’ಮತದಾರರ ನೋಂದಣಿ ಅಭಿಯಾನ’ದ ಪ್ರಾರಂಭದಲ್ಲಿ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಬೆರಳ ತುದಿಯಲ್ಲಿ ಮತದಾರರ ಗುರುತಿನ ಚೀಟಿ ಪಡೆಯಲು ಸಾಧ್ಯವಿದ್ದು ವರ್ಷಕ್ಕೆ ನಾಲ್ಕು ಬಾರಿ ನೋಂದಣಿ ಕಾರ್ಯ ನಡೆಯುತ್ತದೆ. ಹಾಗಾಗಿ ಜಿಲ್ಲಾಧಿಕಾರಿಗಳ ಸೂಚನೆಯನ್ವಯ ಸ್ವೀಪ್ ಕಾರ್ಯಕ್ರಮದಡಿ ಜನವರಿ 01ಕ್ಕೆ 18ವರ್ಷ ತುಂಬಿದ ಭಾರತೀಯ ಪ್ರಜೆಗಳೆಲ್ಲರೂ ಮತದಾನದ ಗುರುತಿನ ಚೀಟಿ ಮಾಡಿಕೊಳ್ಳುವ ಮೂಲಕ ಅಧಿಕೃತವಾಗಿ ಮತದಾರರಾಗಬೇಕೆಂದು ಅವರು ಕರೆ ನೀಡಿದರು.

ಮತದಾನದ ವರ್ಷವಾದ 2023ರ ಹೊತ್ತಿಗೆ ನಮೂನೆ 6 ಮತ್ತು 7ರನ್ವಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಹಾಗೂ ತೆಗೆದು ಹಾಕುವ ಅಗತ್ಯತೆಗಳ ಬಗೆಗವರು ಜಾಗೃತಿ ಮೂಡಿಸಿದರು.

ಈ ಸಂದರ್ಭ ವೋಟರ್ ಹೆಲ್ಪ್ ಲೈನ್ ನ ಮೂಲಕ ಮತದಾರ ನೋಂದಣಿ ಮಾಡುವ ಕುರಿತು ಮಾಹಿತಿ ನೀಡಲಾಯಿತು. ಹಾಗೂ ಮುಂದಿನ ಮೂರು ದಿನಗಳ ಕಾಲ ಕಾಲೇಜಿನಲ್ಲಿ ಅಭಿಯಾನ ನಡೆಯಲಿದ್ದು ಈ ಕಾರ್ಯಕ್ರಮವೂ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಮತದಾರರ ಗುರುತಿನ ಚೀಟಿ ಹೊಂದಿರುವ ಉದ್ದೇಶ ಹೊಂದಿದೆ.

ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕ, ವಿದ್ಯಾರ್ಥಿ ಕ್ಷೇಮಪಾಲನೆ ಹಾಗೂ ಶಿಸ್ತಿನ ಸಮಿತಿಯ ಸಂಯೋಜಕ ಡಾ.ಮಹೇಶ್ ಕುಮಾರ್ ಶೆಟ್ಟಿ ಹೆಚ್. ಉಪಸ್ಥಿತರಿದ್ದರು.ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಮತದಾರ ನೋಂದಣಿ ಅಭಿಯಾನದ ನೋಡಲ್ ಅಧಿಕಾರಿ ನಟರಾಜ್ ಹೆಚ್. ಕೆ ಕಾರ್ಯಕ್ರಮ ನಿರ್ವಹಿಸಿದರು

Ashika S

Recent Posts

ಎಸ್.ಎಸ್.ಎಲ್.ಸಿ ಪರೀಕ್ಷೆ: ಕೊಂಕಣಿಯಲ್ಲಿ ಆರು ವಿದ್ಯಾರ್ಥಿಗಳಿಗೆ 100% ಅಂಕ

ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ಕೊಂಕಣಿ ಶಿಕ್ಷಕರ ನೇಮಕಾತಿಯಾದ ಹತ್ತು ಶಾಲೆಗಳ ಪೈಕಿ ಮೂರು ಶಾಲೆಗಳಲ್ಲಿನ ಒಟ್ಟು ಆರು ವಿದ್ಯಾರ್ಥಿಗಳು…

18 mins ago

ಶಿರ್ವ ಫೈಝುಲ್ ಇಸ್ಲಾಂ ಮದ್ರಸದ ನಾಲ್ವರು ಮಕ್ಕಳು ನಾಪತ್ತೆ

ಶಿರ್ವ ಫೈಝುಲ್ ಇಸ್ಲಾಂ ಮದ್ರಸದ ನಾಲ್ವರು ಮಕ್ಕಳು ಮೇ 14ರಂದು ಮಧ್ಯಾಹ್ನದಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ…

19 mins ago

ಬಂಟ್ವಾಳ ಜಮೀಯ್ಯತುಲ್ ಫಲಾಹ್, ರೋಟರಿ ಕ್ಲಬ್ ನಿಂದ “ಮೆಹ್’ಫಿಲೇ ಈದ್”

 ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕ, ರೋಟರಿ ಕ್ಲಬ್ ಬಂಟ್ವಾಳ, ಉಪ್ಪಿನಂಗಡಿ, ಬಂಟ್ವಾಳ ಟೌನ್ ಹಾಗೂ ವಿಟ್ಲ ಘಟಕದ ಸಹಯೋಗದಲ್ಲಿ ಮೆಹ್'ಫಿಲೇ…

30 mins ago

ಸಂಧಿವಾತದ ಸಮಸ್ಯೆಗೆ ಬಿಸಿನೀರ ಬಳಕೆ ಒಳ್ಳೆಯದು!

ಕೈಕಾಲು ಎಳೆತದಂತಹ ಕಾಯಿಲೆ ಅರ್ಥಾತ್ ಸಂಧಿವಾತ ಹೆಚ್ಚು ನೀರಲ್ಲಿ ಕೆಲಸ ಮಾಡುವವರನ್ನು ಇಲ್ಲಿಲ್ಲದಂತೆ ಕಾಡುತ್ತದೆ. ಅದರಲ್ಲೂ ಶೀತ ಪ್ರದೇಶದಲ್ಲಿ ಕೆಲಸ…

43 mins ago

ಇನ್‌ಸ್ಟಾ ಲೈವ್‌ಗೋಸ್ಕರ ಕಾರಿನ ಸ್ಪೀಡ್‌ ಹೆಚ್ಚಿಸಿದ ಸ್ನೇಹಿತ : ನಾಲ್ವರ ದುರ್ಮರಣ

ಇನ್‌ಸ್ಟಾಗ್ರಾಮ್‌ ಲೈವ್‌ ಮಾಡವುದಕ್ಕಾಗಿ ಸ್ನೇಹಿತ ಕಾರಿನ ವೇಗವನ್ನು ಹೆಚ್ಚಿಸಿದ್ದು ನಂತರ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದ್ದು ನಾಲ್ವರು ಸಾವನಪ್ಪಿದ್ದು…

48 mins ago

ಮಳೆಗಾಗಿ ಕತ್ತೆಗೆ ಮದುವೆ ಮಾಡಿದ ಗ್ರಾಮಸ್ಥರು

ಮಳೆ  ಇಲ್ಲದೆ ಬರ ಪರಿಸ್ಥಿರಿ ಎದುರಾಗಿದ್ದು,  ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಎಲ್ಲ ಸೇರಿಕೊಂಡು ಕತ್ತೆಗಳಿಗೆ ಮದುವೆ ಮಾಡಿ ವರುಣರಾಯನಿಗಾಗಿ ಪ್ರಾರ್ಥಿಸಿದ…

55 mins ago