News Karnataka Kannada
Thursday, April 25 2024
Cricket
ಕ್ಯಾಂಪಸ್

ಸಂತ ಅಲೋಶಿಯಸ್‌ನಲ್ಲಿ ಟೆಡ್‌ ಎಕ್ಸ್‌ ಸ್ಯಾಕ್‌ “ಕೋಸ್ಸಿ”

ಸಂತ ಅಲೋಶಿಯಸ್‌ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ಮಂಗಳೂರು ಆಯೋಜಿಸಿದ ಟೆಡ್‌ ಎಕ್ಸ್‌ ಸ್ಯಾಕ್‌ “ಕೋಸ್ಸಿ” ಸಮಾರಂಭವು ಎಲ್‌ಸಿಆರ್‌ಐ ಸಭಾಂಗಣದಲ್ಲಿ ಬಾನುವಾರ ಫೆಬ್ರವರಿ 4 ರಂದು ನಡೆಯಿತು.
Photo Credit : News Kannada

ಮಂಗಳೂರು: ಸಂತ ಅಲೋಶಿಯಸ್‌ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ಮಂಗಳೂರು ಆಯೋಜಿಸಿದ ಟೆಡ್‌ ಎಕ್ಸ್‌ ಸ್ಯಾಕ್‌ “ಕೋಸ್ಸಿ” ಸಮಾರಂಭವು ಎಲ್‌ಸಿಆರ್‌ಐ ಸಭಾಂಗಣದಲ್ಲಿ ಬಾನುವಾರ ಫೆಬ್ರವರಿ 4 ರಂದು ನಡೆಯಿತು.

ಟೆಡ್‌ ಎಕ್ಸ್‌ ಸ್ಯಾಕ್‌ನಲ್ಲಿ ಒಟ್ಟು 12 ಮಂದಿ ಭಾಷಣಗಾರರಿದ್ದು,  ಉದ್ಯಮಿ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ದೀಕ್ಷಿತ್‌ ರೈ, ಶಾಲಾದಿನಗಳಲ್ಲಿನ ಪಯಣದಿಂದಾಗಿ ಯಾವ ರೀತಿ ಇಂದು ಔದ್ಯಮಶೀಲರಾಗಿದ್ದಾರೆ ಎಂದರು. ಈ ವೇಳೆ  ವಿದ್ಯಾರ್ಥಿಗಳಿಗೆ ಉದ್ಯಮ ಕ್ಷೇತ್ರದಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳಲು ಬೇಕಾಗಿರುವ ಸವಾಲುಗಳ ಕುರಿತು ವಿವರಿಸಿದರು.

ಭಾರತೀಯ ಅಂಧರ ಕ್ರಿಕೇಟ್‌ ತಂಡದ ಮಾಜಿ ನಾಯಕ ಪದ್ಮಶ್ರೀ ಪುರಸ್ಕೃತ ಶೇಖರ್‌ ನಾಯ್ಕ್‌ ಮಾತನಾಡಿ ನಿಮ್ಮೊಳಗಿರುವ
ವೈಕಲ್ಯತೆಯನ್ನು ಬದಿಗಿರಿಸಿ ಅದೇ ನಿಮ್ಮ ಬಲವೆಂದು ಪರಿಗಣಿಸಿದಾಗ ಅದು ಸಾಧನೆಯೆಡೆಗೆ ನಿಮ್ಮನ್ನು ಕರೆದೊಯ್ಯಲು ಸಾಧ್ಯವಾಗುತ್ತದೆ. ಕಷ್ಟ ಬಂದಾಗ ಭರವಸೆಯನ್ನು ಕಳೆದುಗೊಳ್ಳದೆ ಬಲಿಷ್ಟರಾಗಬೇಕು ಎಂದರು.

ಮಾಸ್ಟರ್‌ ಶೆಫ್‌ ಇಂಡಿಯಾದ ಅಂತಿಮ ಸ್ಪರ್ಧಿ ಡಾ. ರುಕ್ಸರ್‌ ಸಯ್ಯದ್‌ ಮಾತನಾಡಿ, ಯಾವುದೇ ಮಟ್ಟಕ್ಕೆ ನಾವು ತಯಲುಪಿದಾಗ ನಮ್ಮೊಂದಿಗೆ ನಮ್ಮ ಮಣ್ಣಿನ ಸಂಸ್ಕೃತಿಯನ್ನು ಜಗತ್ತಿಗೆ ಸಾರಬೇಕಾಗುತ್ತದೆ. ನಮ್ಮ ಮೂಲ ಬೇರುಗಳನ್ನು ನಮ್ಮ ಜೊತೆಗೆ ಕೊಂಡಯ್ಯಬೇಕು,  ಮಾಸ್ಟರ್‌ ಶೆಫ್‌ ಇಂಡಿಯಾದ ಸ್ಪರ್ಧೆಯಲ್ಲೂ, ಕಾಶ್ಮೀರಿ ಆಹಾರ ಪದಾರ್ಥಗಳನ್ನು ತಯಾರಿಸುವುದರ ಜೊತೆಗೆ ನಮ್ಮ ಸಾಂಪ್ರದಾಯಿಕ ಲಿಯನ್ನು ಇಡೀ ಜಗತ್ತಿಗೆ ತೋರ್ಪಡಿಸಲು ಸಾಧ್ಯವಾಯಿತು ಎಂದು ಹೆಮ್ಮೆಪಟ್ಟರು ಡಿಜಿಟಲ್‌ ಕಂಟೆಟ್‌ ಕ್ರಿಯೇಟರ್‌ ನೀರಜ್‌ ಚೌದರಿ ಮಾತನಾಡಿ ಇಂದಿನ ಡಿಜಿಟಲ್‌ ಯುಗದಲ್ಲಿ ನಮ್ಮ ಅಸ್ತಿತ್ವವನ್ನು ಜಗತ್ತಿಗೆ ತೋರ್ಪಡಿಸುವುದು ಕಷ್ಟ. ಇಂದು ಡಿಜಿಟಲ್‌ ಪ್ರೇಕ್ಷಕರ ಗಮನ ಸೆಳೆಯುದು ಸವಾಲಿನ ಕೆಲಸ. ಒಂದೆರಡು ನಿಮಿಷದ ವಿಡಿಯೋ ತಯಾರಿಮಾಡಲು ಇಡೀ ದಿನವನ್ನು ಬಳಸಬೇಕಾಗುತ್ತದೆ ಎಂದರು.

ವಿಯೆಟ್ನಂನಲ್ಲಿ ವೈಇಪಿ ಭಾರತವನ್ನು ಪ್ರತಿನಿಧಿಸಿದ ಎನ್‌ಸಿಸಿ ಕೆಡೆಟ್‌ ಆಶ್ನಾ ರೈ ಮಾತನಾಡಿ, 10 ದಿನಗಳ ಎನ್‌ಸಿಸಿ ಕ್ಯಾಂಪ್‌ನಲ್ಲಿ ಭಾಗವಹಿಸಿದಾಗ ನಿಜವಾದ ಜೀವನ ಎಂದರೆ ಏನು ಎಂಬುವುದು ಅರ್ಥವಾಯಿತ. ಆರಾಮದಾಯಕ ಗುಂಪಿನಿಂದ ಹೊರಬಂದಾಗ ಮಾತ್ರ ಜೀವನದಲ್ಲಿ ಏಳಿಗೆ ಪಡೆಯಲು ಸಾಧ್ಯ. ಅನುಭವಗಳು ಯಶಸ್ಸನ್ನು ನೀಡುತ್ತವೆ ಎಂದರು.

ಆಸಿಡ್‌ ದಾಳಿಗೆ ಒಳಗಾದ ಪ್ರಮೋದಿನಿ ರಾವುಲ್‌ ಮಾತನಾಡಿ, ನಾವು ಬಲಿಪಶುಗಳಾಗಿರದೆ, ಹೋರಾಟಗಾರರಾಗಬೇಕು.
ಸೌಂದರ್ಯತೆ ಮಾತ್ರವಲ್ಲ ಆತ್ಮವಿಶ್ವಾಸ, ದೃಡತೆ ಹೆಚ್ಚಿದ್ದಾಗ ಮಾತ್ರ ಮುಂಬರಲು ಸಾಧ್ಯ ಎಂದರು.

ಭರನಾಟ್ಯ ಕಲಾವಿದ ವಂ. ಫಾ. ಸಜು ಜಾರ್ಜ್‌ ಎಸ್.ಜೆ. ಮಾತನಾಡಿ ನೃತ್ಯದ ಮೇಲಿನ ಅಭಿರುಚಿಯು ನನ್ನನ್ನು ಬೇರೆಡೆಗೆ
ಕೊಂಡೊಯ್ಯಿತು. ಪ್ರತಿಯೊಂದು ಸಂದರ್ಭ-ಘಳಗೆಯನ್ನು ನಾವು ಸವಿಯಬೇಕು ಎಂದರು.

ಎಲ್‌ಜಿಬಿಟಿಕ್ಯೂನ ಕಾರ್ಯಕರ್ತೆ ಆರತಿ ಮಲ್ಹೋತ್ರ ಮಾತನಾಡಿ ಇಂದು ನಾನು ಎಲ್ಲಾ ತಾಯಂದಿರ ಧ್ವನಿಯಾಗಿದ್ದೇನೆ. ಸುತ್ತಮುತ್ತಲಿರುವ ಪ್ರತಿಯೊಬ್ಬನ ನೋವಿಗೆ ನಾವು ಸ್ಪಂದಿಸಬೇಕು, ಇತರರಿಗೆ  ಮಾತನಾಡಲು ಅವಕಾಶವನ್ನು ನೀಡಿ ಅವರ ಕಷ್ಟಗಳಿಗೆ ಸ್ಪಂದಿಸಿ ಹೆಗಲಾಗಬೇಕು. ಕಲವೊಂದು ಚುಚ್ಚು ಮಾತುಗಳು ಇತತರಿಗೆ ಶಸ್ತ್ರವಾಗಿ ಕೊಲ್ಲುವ ಆಯುಧ, ಇವುಗಳಿಂದ ದೂರವಿರಬೇಕು, ಮಾತನ್ನು ಆಡುವ ಮೊದಲು ಸಾವಿರ ಬಾರಿ ಯೋಚಿಸಿ ಮಾತನಾಡಬೇಕು ಎಂದರು.

ಟಿವಿ ಕಲಾವಿದ ಹಾಗೂ ಹಾಸ್ಯಗಾರ ಗಿರಿಶ್ ಸಹದೇವ್‌ ಮಾತನಾಡಿ ಕಲಾವಿದರ ಬದುಕು ನೈಜ್ಯ ಜೀವನಕ್ಕೂ – ಪರದೆಯ ಜೀವನಕ್ಕೂ ವ್ಯತ್ಯಾಸವಿದೆ. ಈ ಸ್ಥಾನಕ್ಕೆ ಬರಲು ಹಲವಾರು ಅವಮಾನ, ಒದ್ದಾಟಗಳನ್ನು ಎದುರಿಸಬೇಕು ಎಂದರು. ಪಶ್ಷಿಮ ಬೆಂಗಾಲದ ಖ್ಯಾತ ಛಾಯಾಚಿತ್ರಗಾರ ವಿಕ್ಕಿ ರೋಯ್, ಮಾತನಾಡಿ ನನ್ನ ಪಯಣವು ನಾನು 11 ವಯಸ್ಸಿನಲ್ಲಿ ಮನೆ ಬಿಟ್ಟು ಚಿಂದಿ ಆಯುವವರೊಂದಿಗೆ ಸೇರಿದಾಗಿನಿಂದ ಶುರುವಾಯಿತು. ನನ್ನ ಕಷ್ಟದ ಸನ್ನಿವೇಶದ ಕಥೆಗಳನ್ನು ಛಾಯಾಗ್ರಾಹಣದ ಮೂಲಕ ಜಗತ್ತಿಗೆ ತೋರಿಸಲು ಮುಂದಾದಾಗ ನನ್ನ ಕಷ್ಟದ ಜೊತೆಗೆ ಇತತರ ಕಷ್ಟಗಳು ನಿಜ ಜಗತ್ತಿಗೆ ತಿಳಿಯಿತು ಎಂದರು.

ಹಿನ್ನಲೆ ಗಾಯಕ ಸಂಗೀತ ನಿರ್ಮಾಪಕ ಕಾರ್ತಿಕ್‌ ಚೆನ್ನೋಜಿ ರಾವ್‌, ಮಾತನಾಡಿ, ನಿಮ್ಮಲ್ಲಿ ನೀವು ನಂಬಿಕೆಯನ್ನಿಟ್ಟಾಗ ಮಾತ್ರ ಮುಂಬರಲು ಸಾಧ್ಯ. ಇಂದಿನ ಯುಗದಲ್ಲಿ ಸಾಮಾಜಿಕ ಮಾದ್ಯಮದಲ್ಲಿ ಎಲ್ಲರೂ ಪ್ರಸಿದ್ದರಾಗಲು ಸಾಧ್ಯ. ಈ ಮಾದ್ಯಮವು ಹಲವಾರು ಅವಕಾಶಗಳನ್ನು ಜನರಿಗೆ ಒದಗಿಸಿಕೊಡುತ್ತದೆ ಎಂದರು.

ಯುದ್ದ ಪರಿಣಿತ ಮೇಜರ್‌ ಸಮರ್‌ ತೂರ್‌, ಯುದ್ದ ಭೂಮಿಯಲ್ಲಿನ ಅನುಭವ ಹಾಗೂ ಸೈನಿಕರ ಕಷ್ಟದ ದಿನಗಳು ಹೇಗಿರುತ್ತವೆ ಎಂಬುವುದರ ಚಿತ್ರಣಗಳನ್ನು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಶೈನ ಡಿಸೋಜಾ ಹಾಗೂ ರಿಶಾನ್‌ ಮಹೇಶ್‌ ನಿರೂಪಿಸಿ, ತಾಸಿನ ಅಹ್ಮದ್‌ ವಂದಿಸಿರು. ಟೆಡ್‌ ಎಕ್ಸ್‌ ಸ್ಯಾಕ್‌ನಲ್ಲಿ ಹಲವಾರು ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು