News Karnataka Kannada
Tuesday, April 16 2024
Cricket
ಕ್ಯಾಂಪಸ್

ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದಲ್ಲಿ ಫುಡ್ ಕಾರ್ನಿವಲ್

ಆರೋಗ್ಯಯುತ ಜೀವನ ಶೈಲಿ ಉತ್ತಮ ಆಹಾರ ಪದ್ಧತಿ ರೂಡಿಸಿಕೊಳ್ಳುವುದು ಮತ್ತು ಸಮತೋಲನ ಆಹಾರ ವಿಧಾನ ರೋಗಗಳಿಂದ ದೂರವಿಡುತ್ತದೆ . ಆರೋಗ್ಯವಾಗಿದ್ದಾಗ ಅಗಾಧವಾದ ನೆಮ್ಮದಿ ನಮ್ಮದಾಗುತ್ತದೆ ಎಂದು ಉಜಿರೆ, ಎಸ್.ಡಿ.ಎಂ ಕಾಲೇಜಿನ ಆಡಳಿತ ಕುಲ ಸಚಿವೆ ಡಾ. ಶಲೀಪ್ ಎ ಪಿ ಹೇಳಿದರು.
Photo Credit : News Kannada

ಉಜಿರೆ: ಆರೋಗ್ಯಯುತ ಜೀವನ ಶೈಲಿ ಉತ್ತಮ ಆಹಾರ ಪದ್ಧತಿ ರೂಡಿಸಿಕೊಳ್ಳುವುದು ಮತ್ತು ಸಮತೋಲನ ಆಹಾರ ವಿಧಾನ ರೋಗಗಳಿಂದ ದೂರವಿಡುತ್ತದೆ. ಆರೋಗ್ಯವಾಗಿದ್ದಾಗ ಅಗಾಧವಾದ ನೆಮ್ಮದಿ ನಮ್ಮದಾಗುತ್ತದೆ ಎಂದು ಉಜಿರೆ, ಎಸ್.ಡಿ.ಎಂ ಕಾಲೇಜಿನ ಆಡಳಿತ ಕುಲ ಸಚಿವೆ ಡಾ. ಶಲೀಪ್ ಎ ಪಿ ಹೇಳಿದರು.

ಉಜಿರೆ, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ರಾಸಾಯನ ಶಾಸ್ತ್ರ ಅಧ್ಯಯನ ವಿಭಾಗವು ಸೋಮವಾರ ಏರ್ಪಡಿಸಿದ ಫುಡ್ ಕಾರ್ನಿವಲ್ ಉದ್ಘಾಟಿಸಿ ಅವರು ಮಾತನಾಡಿದರು.

ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಆಹಾರ ಕ್ರಮ ಮತ್ತು ಪೌಷ್ಟಿಕತೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗ್ರತಿ ಮೂಡುತ್ತದೆ. ಆಹಾರ ತಯಾರಿಕೆ ದೈಹಿಕ ಅರೋಗ್ಯ ಮಾತ್ರವಲ್ಲದೆ ಮನಸ್ಸಿಗೂ ಖುಷಿ ಕೊಡುತ್ತದೆ. ಅಡುಗೆ ಮನೆ ಹೆಂಗಸರಿಗೆ ಮಾತ್ರ ಸೀಮಿತವಲ್ಲ. ಗಂಡು, ಹೆಣ್ಣು ಎಂಬ ತಾರತಮ್ಯವಿಲ್ಲದೆ ಆರೋಗ್ಯದ ದೃಷ್ಟಿಯಿಂದ ಕನಿಷ್ಠ ಪಕ್ಷ ಮೂಲಭೂತ ಆಹಾರ ಸಿದ್ದಪಡಿಸುವುದನ್ನು ಕಲಿತಿರಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ. , ಕಾರ್ಯಕ್ರಮದ ಸಂಯೋಜಕ ಡಾ. ಸುಜಯ್ ಯಂ ಯಂ, ವಿದ್ಯಾರ್ಥಿ ಸಂಯೋಜಕರಾದ ಅಂಜು ಜಯನ್ ಮತ್ತು ಪ್ರತೀಕ್ಷಾ ಮತ್ತಿತರರು ಉಪಸ್ಥಿತರಿದ್ದರು.

ಫುಡ್ ಕರ್ನಿವಲ್ ಅಲ್ಲಿ ವಿದ್ಯಾರ್ಥಿಗಳು ವಿಭಿನ್ನ ರೀತಿಯ ಹಲುವು ಪೌಷ್ಟಿಕ ಭಕ್ಷ್ಯಗಳನ್ನು ತಯಾರಿಸಿದ್ದರು. ವರ್ಣರಂಜಿತ ಖಾದ್ಯಗಳು ಬಾಯಲ್ಲಿ ನೀರುಣಿಸುತ್ತಿದ್ದವು. ವಿದ್ಯಾರ್ಥಿಗಳು, ಅಧ್ಯಾಪಕರು ರುಚಿಕರ ತಿಂಡಿ ತಿನಿಸುಗಳನ್ನು ಸವಿಯುತ್ತ ವಿದ್ಯಾರ್ಥಿಗಳ ಪರಿಶ್ರಮವನ್ನು ಪ್ರಶಂಸಿಸುತ್ತಿದ್ದರು.

ದ್ವಿತೀಯ ರಸಾಯನ ಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಬಿಂಧ್ಯ ಎಂ ಜಿ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು