ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ 10 ಮತ್ತು 12ನೇ ತರಗತಿಯ ಕಂಪಾರ್ಟ್ಮೆಂಟ್ ಫಲಿತಾಂಶಗಳನ್ನ ಇಂದು ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನ cbseresults.nic.in ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಬಹುದು.
ಪರೀಕ್ಷೆಗೆ ಹಾಜರಾದವರು ಸಿಬಿಎಸ್ಇ ಕಂಪಾರ್ಟ್ಮೆಂಟ್ ಫಲಿತಾಂಶವನ್ನ ಪರಿಶೀಲಿಸಲು ತಮ್ಮ ಲಾಗಿನ್ ವಿವರಗಳಾದ ರೋಲ್ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಇತರ ವಿವರಗಳನ್ನ ನಮೂದಿಸಬೇಕಾಗುತ್ತದೆ.
ಸಿಬಿಎಸ್ಇ 10 ನೇ ತರಗತಿ ಕಂಪಾರ್ಟ್ಮೆಂಟ್ ಅಥವಾ ಪೂರಕ ಪರೀಕ್ಷೆಗಳು ಜುಲೈ 17 ರಿಂದ ಜುಲೈ 22 ರವರೆಗೆ ನಡೆದರೆ, 12 ನೇ ತರಗತಿ ಕಂಪಾರ್ಟ್ಮೆಂಟ್ ಪರೀಕ್ಷೆಗಳು ಜುಲೈ 17 ರಂದು ಒಂದೇ ದಿನ ನಡೆದವು. ಜುಲೈ 6 ರಿಂದ ಜುಲೈ 20, 2023 ರವರೆಗೆ ಸಿಬಿಎಸ್ಇ ಪ್ರಾಯೋಗಿಕ ಪರೀಕ್ಷೆ ನಡೆದಿತ್ತು.