ಕ್ಯಾಂಪಸ್

ಮೈಸೂರಿನ ಎಸ್ ಡಿ ಎಮ್ ಐ ಎಮ್ ಡಿ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ

ಮೈಸೂರು, ಅ. 31 : ಮೈಸೂರಿನ ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆ೦ಟ್ ಡೆವಲಪ್ಮೆ೦ಟ್ (ಎಸ್ ಡಿ ಎಮ್ ಐ ಎಮ್ ಡಿ) ಸಂಸ್ಥೆಯಲ್ಲಿ ‘ಕಾರ್ಪೊರೇಟ್ ಹಣಕಾಸು ಮತ್ತು ಹಣಕಾಸು ಮಾರುಕಟ್ಟೆಗಳು’ ಎಂಬ ಹೆಸರಿನ, ‘ನವೀನ ಸಾಮಾನ್ಯ ಪರಿಸ್ಥಿತಿಯಲ್ಲಿ ಹಣಕಾಸು ಮಾರುಕಟ್ಟೆಗಳು – ಮುಂದಿನ ದಾರಿ’  ಈ ವಿಷಯದ ಕುರಿತ ಒಂಭತ್ತನೆಯ ಅಂತರರಾಷ್ಟ್ರೀಯ ಆರ್ಥಿಕ ವಿಷಯದ ಸಮ್ಮೇಳನವು ಅಕ್ಟೋಬರ್ 28 ಮತ್ತು 29 ರಂದು ಆನ್‌ಲೈನ್ ಮೂಲಕ ನಡೆಯಿತು.

ಈ ಕಾರ್ಯಕ್ರಮದಲ್ಲಿ ಹಣಕಾಸು ವಿಭಾಗ ಮತ್ತು ಸಮ್ಮೇಳನದ ಮುಖ್ಯಸ್ಥರಾಗಿದ್ದ,  ಅಸೋಸಿಯೇಟ್ ಪ್ರೊಫೆಸರ್ ಡಾ. ಎಂ. ಶ್ರೀರಾಮ್ ಸಮ್ಮೇಳನಕ್ಕೆ ಆಗಮಿಸಿದವರಿಗೆ ಸ್ವಾಗತ ಕೋರಿ, 2021ರ ಸಮ್ಮೇಳನದ ಮುಖ್ಯ ವಿಷಯದ ಬಗ್ಗೆ ಹೇಳಿದರು.  ಜಂಟಿ ಆಡಳಿತಾಧಿಕಾರಿ, ಸನ್ಸೆರಾ ಇಂಜನಿಯರಿಂಗ್ ಲಿಮಿಟೆಡ್  ಬೆಂಗಳೂರಿನ  ಎಫ್. ಆರ್. ಸಿಂಘ್ವಿ,  ಸಮ್ಮೇಳನವನ್ನು ಉದ್ಘಾಟಿಸಿ, ಪ್ರಧಾನ ಭಾಷಣ ಮಾಡಿದರು. ಹಣವನ್ನಾಗಿ ಬದಲಾಯಿಸಬಲ್ಲ ಆಸ್ತಿಯನ್ನು ಹೊಂದಿರುವ ಪ್ರಾಮುಖ್ಯತೆಯ ಬಗ್ಗೆ ಅವರು ತಮ್ಮ ಭಾಷಣದಲ್ಲಿ ಹೇಳಿದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಶಿನ್ ಲರ್ನಿಂಗ್ ಮುಖಾಂತರ ಗಣಕೀಕರಣ ಆಗಿ, ಅದು ಒಂದು ಉದ್ಯಮದ ಅರ್ಥ ವ್ಯವಸ್ಥೆಯನ್ನು ಹೇಗೆ ಬದಲಾಯಿಸಿದೆ ಎಂಬುದರ ಬಗ್ಗೆ ಮಾತನಾಡಿದರು.

ಮೈಸೂರಿನ ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆ೦ಟ್ ಡೆವಲಪ್ಮೆ೦ಟ್ (ಎಸ್ ಡಿ ಎಮ್ ಐ ಎಮ್ ಡಿ) ಸಂಸ್ಥೆಯ ನಿರ್ದೇಶಕರಾದ ಡಾ. ಎನ್. ಆರ್. ಪರಶುರಾಮನ್ ಅವರು ಸಮ್ಮೇಳನದ ಸಿಡಿಯನ್ನು ಬಿಡುಗಡೆ ಮಾಡಿದರು. ಅವರು ತಮ್ಮ ಭಾಷಣದಲ್ಲಿ ಔದ್ಯಮಿಕ ಹಣಕಾಸು ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ಆಗಿರುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಹೇಳಿದರು.

ಸಮ್ಮೇಳನದ ತಾಂತ್ರಿಕ ಅವಧಿಯನ್ನು ಲೊಕ್ಕೂರ್ ಫಿನ್ವೆಸ್ಟ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರಿನ ಶ್ರೀ ಭರತ್ ರಾಮ್ ನಡೆಸಿಕೊಟ್ಟರು. ಬಂಡವಾಳ ಮಾರುಕಟ್ಟೆಯ ಬಗ್ಗೆ ಅವರು ಮಾತನಾಡಿದರು. ಬಂಡವಾಳ ಹೂಡುವ ಮುನ್ನ ಅನೇಕ ಅಂಶಗಳನ್ನು ಗಮನಿಸಬೇಕೆಂದು ಅವರು ಕಿವಿಮಾತು ಹೇಳಿದರು. ಶ್ರೀ. ಜೇಕಬ್ ಥಾಮಸ್, ವಿತರಣಾ ನಿರ್ವಾಹಕರು, ಟಿ ಸಿ ಎಸ್ ಲಿಮಿಟೆಡ್, ಜರ್ಮನಿ, ಇವರು ಬ್ಲಾಕ್ ಚೈನ್ ಮತ್ತು ಕ್ರಿಪ್ಟೋ ಕರೆನ್ಸಿ ಬಗ್ಗೆ ಮಾತನಾಡಿದರು.

ದೇಶ, ವಿದೇಶಗಳಿಂದ ಭಾಗವಹಿಸಿದ್ದ ಲೇಖಕರು, ಐವತ್ತಕ್ಕೂ ಹೆಚ್ಚು ಲೇಖನಗಳನ್ನು ಪ್ರಸ್ತುತಪಡಿಸಿದರು. ಸಮ್ಮೇಳನದ ಸಮಾರೋಪ ಭಾಷಣವನ್ನು ಕು. ರಜನಿ ಠಾಕುರ್, ಮುಖ್ಯ ಅರ್ಥಶಾಸ್ತ್ರಜ್ಞರು, ಆರ್ ಬಿ ಎಲ್ ಬ್ಯಾಂಕ್ ಲಿಮಿಟೆಡ್, ಮುಂಬೈ ಇವರು ಮಾಡಿದರು. ಇಂದಿನ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹಾಗೂ ಜಾಗತಿಕ ಮಟ್ಟದಲ್ಲಿನ ಸಾಂಕ್ರಾಮಿಕದಿಂದ ಹಣಕಾಸು ಮಾರುಕಟ್ಟೆಯ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಮಾತನಾಡಿದರು. ಈಗ ಅರ್ಥ ವ್ಯವಸ್ಥೆಯು ತನ್ನ ಯಥಾಸ್ಥಿತಿಯತ್ತ ಮರಳುತ್ತಿದ್ದು, ಅದು ಭಾರತದ ಹಣಕಾಸು ಮಾರುಕಟ್ಟೆಯನ್ನು ಗಮನಿಸಿದಾಗ ತಿಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.

Gayathri SG

Recent Posts

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ: ಕಂಗನಾ ರಣಾವತ್

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ, ಬಡ ಕುಟುಂಬದಲ್ಲಿ ಹುಟ್ಟಿ ದೇಶದ ಕಲ್ಯಾಣ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಂದು ಹಿಮಾಚಲ…

11 mins ago

ವಾಸವಿ ಯುವಜನ ಸಂಘದಿಂದ ರಕ್ತದಾನ ಶಿಬಿರ : ದಿನೇಶ್‌ಗುಪ್ತ

ನಗರದ ವಾಸವಿ ಯುವಜನ ಸಂಘ ಮತ್ತು ವಾಸವಿ ಕ್ಲಬ್‌ ಆಶ್ರಯದಲ್ಲಿ ಇಂದು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು…

39 mins ago

ಗ್ರಾಮಸ್ಥರ ಆರೋಗ್ಯ ಸುರಕ್ಷತೆಗೆ ಕ್ರಮಕೈಗೊಳ್ಳಲು ಬಿಜೆಪಿ ಒತ್ತಾಯ

ಡೆಂಗ್ಯೂ ಸೋಂಕಿನಿಂದ ಬಳಲುತ್ತಿರುವ ಗ್ರಾಮಕ್ಕೆ ತಜ್ಞ ವೈದ್ಯಾಧಿಕಾರಿ ಗಳ ತಂಡವನ್ನು ರಚಿಸಿ ನಿವಾಸಿಗಳ ಆರೋಗ್ಯ ಕಾಪಾಡಬೇಕು ಎಂದು ಎರೆಹಳ್ಳಿ ಗ್ರಾಮಸ್ಥರು…

47 mins ago

ಕಿಯಾ ಕಾರಿಗೆ ಅಡ್ಡ ಬಂದ ಕುದುರೆ: ಸರಣಿ ಅಪಘಾತ

ಕುದುರೆಯೊಂದು ಏಕಾಏಕಿ ಕಿಯಾ ಕಾರಿಗೆ ಅಡ್ಡ ಬಂದ ಕಾರಣ ಸರಣಿ ಅಪಘಾತ ಸಂಭಿಸಿರೋ ಘಟನೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹ್ಯಾಂಡ್…

48 mins ago

ಹಿರಿಯಡ್ಕ: ಕಾಲೇಜಿಗೆ ಹೋದ ಯುವತಿ ನಾಪತ್ತೆ

ಹಿರಿಯಡ್ಕ ನಿವಾಸಿ ವಿದ್ಯಾಲಕ್ಷ್ಮೀ (20) ಎಂಬ ಯುವತಿಯು ಏಪ್ರಿಲ್ 19 ರಂದು ಕಾಲೇಜಿಗೆಂದು ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.

58 mins ago

ಕೆಸರು ಗದ್ದೆಯಾದ ತಾಲೂಕು ಆಡಳಿತ ಸೌಧ: ಕೆಲಸಕ್ಕಾಗಿ ಬಂದ ಸಾರ್ವಜನಿಕರ ಪರದಾಟ

ಅಫಜಲಪುರ ತಾಲೂಕು ಆಡಳಿತ ಸೌಧ ಅಕ್ಷರಶಃ ಕೆಸರು ಗದ್ದೆಯಾಗಿದೆ. ದಿನಾಲು ಸಾವಿರಾರು ಜನರು ತಹಶೀಲ್ದಾರ ಕಚೇರಿಗೆ ತಮ್ಮ ಕೆಲಸಗಳಿಗೆ ಬಂದು…

1 hour ago