Ad

13,966 ಕೋಟಿ ರೂ ಮೊತ್ತದ 7 ಕೃಷಿ ಯೋಜನೆಗಳಿಗೆ ಕೇಂದ್ರ ಸಂಪುಟ ಸಮ್ಮತಿ

New Project (17)

ನವದೆಹಲಿ: ಕೃಷಿ ಕ್ಷೇತ್ರಕ್ಕೆ ಪುಷ್ಟಿ ಕೊಡಲು ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ 13,966 ಕೋಟಿ ರೂ ಮೊತ್ತದ ಏಳು ಪ್ರಮುಖ ಕೃಷಿ ಯೋಜನೆಗಳಿಗೆ ಕೇಂದ್ರ ಸಂಪುಟ ಇಂದು ಅನುಮೋದನೆ ನೀಡಿದೆ.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಕೇಂದ್ರ ಸಚಿವ ಡಾ. ಎ ವೈಷ್ಣವ್ ಈ ವಿಷಯವನ್ನು ತಿಳಿಸಿದರು. ಇದರಲ್ಲಿ ಡಿಜಿಟಲ್ ಅಗ್ರಿಕಲ್ಚರ್ ಮಿಷನ್, ಸುಸ್ಥಿರ ತೋಟಗಾರಿಕೆ, ಕೃಷಿ ವಿಜ್ಞಾನ ಕೇಂದ್ರ ಇತ್ಯಾದಿ ಯೋಜನೆಗಳೂ ಒಳಗೊಂಡಿವೆ.

ಆಹಾರ ಮತ್ತು ಪೌಷ್ಟಿಕ ಭದ್ರತೆಗೆ ಬೆಳೆ ವಿಜ್ಞಾನ: 3,979 ಕೋಟಿ ರೂ., . ಕೃಷಿ ಶಿಕ್ಷಣ ಮತ್ತು ನಿರ್ವಹಣೆಗೆ 2,291 ಕೋಟಿ ರೂ., ಡಿಜಿಟಲ್ ಅಗ್ರಿಕಲ್ಚರ್ ಮಿಷನ್​ಗೆ 2,817 ಕೋಟಿ ರೂ., ಜಾನುವಾರು ಆರೋಗ್ಯ ಮತ್ತು ಉತ್ಪನ್ನತೆ: 1,702 ಕೋಟಿ ರೂ., ತೋಟಗಾರಿಕೆ ಅಭಿವೃದ್ಧಿಗೆ 860 ಕೋಟಿ ರೂ., ಕೃಷಿ ವಿಜ್ಞಾನ ಕೇಂದ್ರಕ್ಕೆ 1,202 ಕೋಟಿ ರೂ., ನೈಸರ್ಗಿ ಸಂಪನ್ಮೂಲ ನಿರ್ವಹಣೆಗೆ 1,202 ಕೋಟಿ ರೂ ನೀಡಲಾಗಿದೆ.

Ad
Ad
Nk Channel Final 21 09 2023