ನವದೆಹಲಿ : ಹೊಸ ಎತ್ತರವನ್ನುಮುಟ್ಟಿದ ಸೆನ್ಸೆಕ್ಸ್ ಮಂಗಳವಾರ ಸುಮಾರು 91 ಪಾಯಿಂಟ್ ಏರಿಕೆ ಕಂಡು 83,079.66ಕ್ಕೆ ತಲುಪಿದೆ. ಆದ್ರೆ, ನಿಫ್ಟಿ ಮೊದಲ ಬಾರಿಗೆ 25,400 ಮಟ್ಟಕ್ಕಿಂತ ಮೇಲಕ್ಕೆ ತಲುಪಿದೆ. ಬಡ್ಡಿದರಗಳ ಬಗ್ಗೆ ಬಹುನಿರೀಕ್ಷಿತ ಯುಎಸ್ ಫೆಡ್ ನಿರ್ಧಾರಕ್ಕೆ ಮುಂಚಿತವಾಗಿ ದೃಢವಾದ ಜಾಗತಿಕ ಪ್ರವೃತ್ತಿಗಳ ಮಧ್ಯೆ ದಾಖಲೆಯ ಏರಿಕೆ ಬಂದಿದೆ.
ಸತತ ಎರಡನೇ ದಿನವೂ ಸೆನ್ಸೆಕ್ಸ್ ಹೊಸ ದಾಖಲೆಗಳನ್ನ ನಿರ್ಮಿಸಿದೆ. 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 90.88 ಪಾಯಿಂಟ್ ಅಥವಾ ಶೇಕಡಾ 0.11 ರಷ್ಟು ಏರಿಕೆ ಕಂಡು 83,079.66 ಕ್ಕೆ ತಲುಪಿದೆ. ಇದೇ ಮೊದಲ ಬಾರಿಗೆ ಪ್ರಮುಖ ಸೂಚ್ಯಂಕವು 83,000 ಮಟ್ಟಕ್ಕಿಂತ ಹೆಚ್ಚಾಗಿದೆ. ದಿನದ ವಹಿವಾಟಿನಲ್ಲಿ 163.63 ಪಾಯಿಂಟ್ ಅಥವಾ ಶೇಕಡಾ 0.19 ರಷ್ಟು ಏರಿಕೆ ಕಂಡು 83,152.41 ಕ್ಕೆ ತಲುಪಿದೆ.
Ad