ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಭೆ ನಡೆದಿದ್ದು, ರೆಪೋ ದರವನ್ನು ಸತತ 9ನೇ ಬಾರಿಗೆ ಯಥಾಸ್ಥಿತಿ ಮುಂದುವರಿಸಲಾಗಿದೆ. ಇನ್ನು, ರೆಪೋ ದರದ ಜತೆಗೆ ಆರ್ಬಿಐ ಕೆಲವು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಂಡಿದೆ. ಅದರಲ್ಲೂ, ಬ್ಯಾಂಕ್ಗಳಿಗೆ ಚೆಕ್ ಹಾಕಿದ ಕೆಲವೇ ಗಂಟೆಗಳಲ್ಲಿ ಮೊತ್ತವು ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂಬ ಘೋಷಣೆಯು ಜನರಿಗೆ ತುಂಬ ಅನುಕೂಲವಾಗಲಿದೆ.
ಮೊಬೈಲ್ನಲ್ಲಿ ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವುದು, ಬ್ಯಾಂಕ್ಗಳಲ್ಲಿ ಆರ್ಟಿಜಿಎಸ್, ಎನ್ಇಎಫ್ಟಿ (ನೆಫ್ಟ್) ಮೂಲಕ ಹಣ ವರ್ಗಾವಣೆ ಮಾಡುವ ಕಾಲದಲ್ಲಿ ಬ್ಯಾಂಕ್ನಲ್ಲಿ ಚೆಕ್ ಹಾಕಿದರೆ, 2-3 ದಿನ ಬೇಕಾಗುತ್ತಿತ್ತು. ವಾರಾಂತ್ಯ ಅಥವಾ ರಜೆ ಇದ್ದರೆ ಚೆಕ್ನ ಮೊತ್ತವು ಜಮೆಯಾಗಲು 4-5 ದಿನ ಬೇಕಾಗುತ್ತಿತ್ತು. ಈಗ ಬ್ಯಾಂಕ್ಗೆ ನೀಡಿದ ಕೆಲವೇ ಗಂಟೆಗಳಲ್ಲಿ ಮೊತ್ತವು ಇನ್ನು ಮುಂದೆ ಖಾತೆಗೆ ಜಮೆಯಾಗಲಿದೆ. ಇದರಿಂದ ಉದ್ಯಮಿಗಳು ಸೇರಿ ಎಲ್ಲರಿಗೂ ಅನುಕೂಲವಾಗಲಿದೆ.
Ad