ಬೆಂಗಳೂರು: ಹೀನಾಯ ಇಳಿಕೆ ಕಂಡಿದ್ದ ಬಿಎಸ್‌ಎನ್‌ಎಲ್ ಇದೀಗ ಯಶಸ್ಸಿನ ಮೊದಲ ಮೆಟ್ಟಿಲು ಏರಿದೆ. ಜಿಯೋ, ಏರ್‌ಟೆಲ್ ಸೇರಿದಂತೆ ಟೆಲಿಕಾಂ ಕ್ಷೇತ್ರದ ಪೈಪೋಟಿ ನಡುವೆ ಸಿಲುಕಿದ್ದ ಬಿಎಸ್‌ಎನ್‌ಎಲ್ ಮೈಕೊಡವಿ ನಿಂತುಕೊಂಡಿದೆ. ದುಬಾರಿ ರಿಚಾರ್ಜ್ ಪ್ಲಾನ್‌ಗಳಿಂದ ಇತ್ತೀಚೆಗೆ ಹಲವು ಗ್ರಾಹಕರು ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಆಗಿದ್ದಾರೆ. ಇದೀಗ ದಿನದಿಂದ ದಿನಕ್ಕೆ ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ BSNL ವಿಶೇಷ ಆಫರ್ ಘೋಷಿಸಿದೆ. ಸರ್ಕಾರಿ ಟೆಲಿಕಾಂ ಬಿಎಸ್‌ಎನ್‌ಎಲ್ ಇದೀಗ 4ಜಿ ಸೇವೆ ನೀಡುತ್ತಿದೆ. ಇದರ ಜೊತೆಗೆ ಇದೀಗ 160 ವ್ಯಾಲಿಟಿಡಿಯೊಂದಿಗೆ 320 ಜಿಬಿ ಉಚಿತ ಡೇಟಾ, ಅನ್‌ಲಿಮಿಟೆಡ್ ಕರೆಗಳನ್ನು ಘೋಷಿಸಲಾಗಿದೆ.
ಈ ಪ್ಲಾನ್ ರಿಚಾರ್ಜ್ ಮಾಡಿಕೊಂಡರೆ ಸರಿಸುಮಾರು ನಾಲ್ಕೂವರೆ ತಿಂಗಳು ವ್ಯಾಲಿಟಿಡಿ ಇರಲಿದೆ. ಈ ಪ್ಲಾನ್‌ನಲ್ಲಿ ಪ್ರತಿ ದಿನ 2 ಜಿಬಿ ಹೈಸ್ಪೀಡ್ ಡೇಟಾ ಸಿಗಲಿದೆ. ಇದು 160 ದಿನಕ್ಕೆ ಒಟ್ಟು 320 ಜಿಬಿ ಉಚಿತ ಡೇಟಾ ಲಾಭ ಸಿಗಲಿದೆ. ಇದರ ಜೊತೆಗೆ ಪ್ರತಿ ದಿನ 100 ಎಸ್ಎಂಎಸ್ ಉಚಿತವಾಗಿ ಸಿಗಲಲಿದೆ. ಈ ಪ್ಲಾನ್ ರಿಚಾರ್ಜ್ ಮೊತ್ತ 997 ರೂಪಾಯಿ. ಇದರ ಜೊತೆಗೆ ಯಾವುದೇ ನೆಟ್‌ವರ್ಕ್‌ಗೆ ಉಚಿತ ಅನಿಯಮಿತ ಕರೆ ನೀಡಲಾಗಿದೆ.