ಕಳೆದ ಶನಿವಾರ ಪಾವೆಲ್ ಡುರೊವ್ ತನ್ನ ಖಾಸಗಿ ಜೆಟ್ನಲ್ಲಿ ಫ್ರಾನ್ಸ್ಗೆ ಆಗಮಿಸಿದಾಗ, ಪೊಲೀಸರು ಅವರನ್ನು ಸ್ವಾಗತಿಸಿದರು, ಬಳಿಕ ತಕ್ಷಣ ಅವರನ್ನು ಬಂಧಿಸಿದ್ದಾರೆ. ನೇರ ಮೆಸೇಜಿಂಗ್ ಪ್ಲಾಟ್ಫಾರ್ಮ್ ಟೆಲಿಗ್ರಾಮ್ನ ಸ್ಥಾಪಕರಾಗಿ, ಅದರ ಮೇಲೆ ನಡೆದ ವ್ಯಾಪಕ ಅಪರಾಧಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಮರುದಿನ, ಫ್ರೆಂಚ್ ನ್ಯಾಯಾಧೀಶರು ಡುರೊವ್ ಅವರ ಆರಂಭಿಕ ಬಂಧನದ ಅವಧಿಯನ್ನು ವಿಸ್ತರಿಸಿದರು, ಪೊಲೀಸರಿಗೆ ಅವರನ್ನು 96 ಗಂಟೆಗಳವರೆಗೆ ಬಂಧಿಸಲು ಅವಕಾಶ ನೀಡಿದ್ದಾರೆ. ಇನ್ನುಈ ಪ್ರಕರಣವು ಟೆಲಿಗ್ರಾಮ್ಗೆ ಮಾತ್ರವಲ್ಲದೇ, ಇತರ ಜಾಗತಿಕ ತಂತ್ರಜ್ಞಾನ, ಸಾಮಾಜಿಕ ಜಾಲತಾಣ ಮೇಲೂ ಪರಿಣಾಮ ಬೀರಬಹುದು ಎನ್ನಲಾಗಿದೆ.
Ad