ಬಿಗ್ ಬಿಲಿಯನ್ ಡೇ ಸಮಯದಲ್ಲಿ ಆನ್‌ಲೈನ್ ಶಾಪಿಂಗ್ ಈಗ ಭಾರತದಲ್ಲಿ ಟ್ರೆಂಡಿಂಗ್ ಆಗಿಬಿಟ್ಟಿದೆ. ಈ ಬಾರಿಯ ಬಿಗ್ ಸೇಲ್ನಲ್ಲಿ ಗ್ರಾಹಕರಿಗೆ ಬಂಫರ್ ಆಫರ್ ನೀಡಲಾಗುತ್ತಿದೆ. ಫೋನ್, ಲಾಪ್ ಟಾಪ್, ಬೈಕ್, ಟಿವಿ ಹೀಗೆ ಸಾಕಷ್ಟು ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇ-ಕಾಮರ್ಸ್ ಸಂಸ್ಥೆಯೂ ಫ್ಲಿಪ್‌ಕಾರ್ಟ್‌ನ “ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2024” (Flipkart Big Billion Days Sale) ಈ ತಿಂಗಳ 26 ಮಧ್ಯರಾತ್ರಿ 12.00 ಗಂಟೆಯಿಂದ ಪ್ರಾರಂಭವಾಗಿದೆ.
ಪ್ರತಿ ವರ್ಷದಂತೆ, ಫ್ಲಿಪ್‌ಕಾರ್ಟ್ ಎಲ್ಲಾ ವಿಭಾಗಗಳಲ್ಲಿ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ನೀಡುತ್ತದೆ. ಆದರೆ ಶೋ ಸ್ಟಾಪರ್ ಐಫೋನ್‌ಗಳಲ್ಲಿ ರಿಯಾಯಿತಿ ಕೊಡುಗೆಗಳನ್ನು ನೀಡಿರುತ್ತವೆ. ಈಗಾಗಲೇ ಐಫೋನ್‌ನ ಬೆಲೆಗೆಗಳು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿವೆ. ಐಫೋನ್ 15 ಪ್ರೋ, ಐಫೋನ್ 15 ಪ್ರೊ ಮ್ಯಾಕ್ಸ್, ಸ್ಯಾಮ್‌ಸಂಗ್, Vivo, Oppo, OnePlus ಫೋನ್‌ಗಳ ಬೆಲೆ ಲೀಕ್ ಆಗಿದೆ. ವಿಶೇಷ ಎಂದರೆ ಐಫೋನ್ 15 ಪ್ರೊ ಅನ್ನು 89,999 ರೂ, ಐಫೋನ್ 15 ಪ್ರೊ ಮ್ಯಾಕ್ಸ್ 1,09,999 ರೂ, ನಥಿಂಗ್ ಫೋನ್ ಹಾಗೂ CMF ಉತ್ಪನ್ನಗಳ ಮೇಲೆ ಶೇಕಡಾ 50 ರಷ್ಟು ಡಿಸ್ಕೌಂಟ್ ಹಾಗೂ ಕನಿಷ್ಠ ಬೆಲೆ ಆಫರ್ ಘೋಷಿಸಿದೆ.
ಬಿಗ್ ಬಿಲಿಯನ್ ಡೇನಲ್ಲಿ ಈ ಬಾರಿ ಬೈಕ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಟಾಪ್ ಬ್ರ್ಯಾಂಡ್‌ಗಳಾದ Hero, Bajaj, TVS, Ola, Chetak, Jawa, Yezdi, Vida, Ather ಕಂಪನಿಯ ದ್ವಿಚಕ್ರ ವಾಹನಗಳನ್ನು ಆಫರ್‌ಗಳ ಸಮೇತ ಸೇಲ್ ಮಾಡಲಾಗುತ್ತಿದೆ.