ಸೆಪ್ಟೆಂಬರ್‌ನಲ್ಲಿ ಭಾರತದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹವು 1.73 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿದೆ. ಇದು ವರ್ಷದಿಂದ ವರ್ಷಕ್ಕೆ 6.5 ಶೇಕಡಾ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದು ಅಧಿಕೃತ ಅಂಕಿಅಂಶಗಳು ತೋರಿಸಿವೆ. ಕಳೆದ ವರ್ಷ ಇದೇ ತಿಂಗಳಲ್ಲಿ ಸರ್ಕಾರ 1.63 ಲಕ್ಷ ಕೋಟಿ ರೂ.
ಜಿಎಸ್‌ಟಿ ಸಂಗ್ರಹವಾಗಿತ್ತು. ಕಳೆದ ತಿಂಗಳು ದೇಶೀಯ ಆದಾಯದಲ್ಲಿ ಶೇಕಡ 5.9 ರಷ್ಟು ಏರಿಕೆ ಕಂಡುಬಂದಿದ್ದು, ಸರಿಸುಮಾರು 1.27 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಸರಕುಗಳ ಆಮದು ಆದಾಯವೂ ಶೇ.8ರಷ್ಟು ವೃದ್ಧಿಯಾಗಿದ್ದು, 45,390 ಕೋಟಿ ರೂ.ಗೆ ತಲುಪಿದೆ.ಇದೇ ಅವಧಿಯಲ್ಲಿ, 20,458 ಕೋಟಿ ರೂ. ಮೊತ್ತದ ಮರುಪಾವತಿಗಳನ್ನು ನೀಡಲಾಗಿದ್ದು, ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ ಶೇ.31ರಷ್ಟು ಹೆಚ್ಚಳವಾಗಿದೆ.
ಈ ಮರುಪಾವತಿಗಳನ್ನು ಲೆಕ್ಕಹಾಕಿದ ನಂತರ, ಸೆಪ್ಟೆಂಬರ್‌ನಲ್ಲಿ ನಿವ್ವಳ GST ಆದಾಯವು 1.53 ಲಕ್ಷ ಕೋಟಿ ರೂ.ಗಳಾಗಿದ್ದು, ಇದು ಹಿಂದಿನ ವರ್ಷಕ್ಕಿಂತ 3.9 ಶೇಕಡಾ ಹೆಚ್ಚಾಗಿದೆ.ಆಗಸ್ಟ್ ನಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 10 ರಷ್ಟು ಏರಿಕೆಯಾಗಿ 1,74,962 ಕೋಟಿ ರೂ., ಆಗಸ್ಟ್ 2023 ರಲ್ಲಿ ಒಟ್ಟು GST ಆದಾಯವು 1,59,069 ಕೋಟಿ ರೂ.ಜುಲೈ ತಿಂಗಳಿಗೆ ಒಟ್ಟು 182,075 ಕೋಟಿ ರೂ ಸಂಗ್ರಹವಾಗಿದೆ. 2024 ರಲ್ಲಿ ಇಲ್ಲಿಯವರೆಗೆ, ಒಟ್ಟು GST ಸಂಗ್ರಹವು 10.1 ರಷ್ಟು ಹೆಚ್ಚಾಗಿ 9.13 ಲಕ್ಷ ಕೋಟಿ ರೂ.ಗೆ ತಲುಪಿದೆ.