Ad

ಬಿಎಸ್ಸೆನ್ನೆಲ್​ನಿಂದ ಬಹಳ ಅಗ್ಗದ ದರದಲ್ಲಿ ರೀಚಾರ್ಜ್ ಪ್ಲಾನ್ಸ್

Bsnl

ನವದೆಹಲಿ: ಕಳೆದ ಎರಡು ವರ್ಷದಿಂದ ಬಹುತೇಕ ನಿಷ್ಕ್ರಿಯಗೊಂಡಂತಿದ್ದ ಬಿಎಸ್​ಎನ್​ಎಲ್ ಮರಳಿ ಫಾರ್ಮ್​ಗೆ ಬರುತ್ತಿದೆ. ಸದ್ಯ 3ಜಿ ನೆಟ್ವರ್ಕ್ ಹೊಂದಿರುವ ಬಿಎಸ್​ಎನ್​ಎಲ್ ಸದ್ಯದಲ್ಲೇ ದೇಶಾದ್ಯಂತ 4ಜಿ ನೆಟ್ವರ್ಕ್​ಗೆ ಅಪ್​ಡೇಟ್ ಆಗಲಿದೆ.

Ad
300x250 2

ಇದರ ಜೊತೆಗೆ ಆಕರ್ಷಕ ಡಾಟಾ ಪ್ಲಾನ್​ಗಳನ್ನು ಬಿಎಸ್​ಎನ್​ಎಲ್ ಬಿಡುಗಡೆ ಮಾಡಿದೆ. ರಿಲಾಯನ್ಸ್ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಬೆಲೆಗಳನ್ನು ತೀವ್ರವಾಗಿ ಹೆಚ್ಚಳ ಮಾಡಿದ ಬಳಿಕ ಟೆಲಿಕಾಂ ಗ್ರಾಹಕರಿಂದ ಘರ್ ವಾಪ್ಸಿ, ಬಾಯ್ಕಾಟ್ ಟ್ರೆಂಡ್ ಶುರುವಾಗಿದೆ. ಜಿಯೋ ಮತ್ತು ಏರ್ಟೆಲ್​ನಿಂದ ಬಹಳಷ್ಟು ಗ್ರಾಹಕರು ಬಿಎಸ್​ಎನ್​ಎಲ್ ಕಡೆ ಮುಖ ಮಾಡತೊಡಗಿದ್ದಾರೆ.

ಬಿಎಸ್​ಎನ್​ಎಲ್ ತನ್ನ ಎಲ್ಲಾ ಪ್ರೀಪೇಡ್ ಪ್ಲಾನ್​ಗಳನ್ನು ಪರಿಷ್ಕರಿಸಿದೆ. ಅದರಲ್ಲಿ ಗಮನ ಸೆಳೆದದ್ದು 395 ದಿನಗಳ ಒಂದು ಪ್ಲಾನ್. 13 ತಿಂಗಳ ವ್ಯಾಲಿಡಿಟಿ ಇರುವ ಈ ಪ್ಲಾನ್ ಬೆಲೆ ಕೇವಲ 2,399 ರೂ ಮಾತ್ರ. ಅಂದರೆ ತಿಂಗಳಿಗೆ ಸುಮಾರು 184 ರೂ ಮಾತ್ರವೇ.

ಈ ಪ್ಲಾನ್​ನಲ್ಲಿ ಗ್ರಾಹಕರು ದಿನಕ್ಕೆ 2ಜಿಬಿಯಷ್ಟು ಹೈಸ್ಪೀಡ್ ಡೇಟಾ ಪಡೆಯುತ್ತಾರೆ. ದಿನಕ್ಕೆ 100 ಎಸ್ಸೆಮ್ಮೆಸ್ ಕಳುಹಿಸುವ ಅವಕಾಶ ಇರುತ್ತದೆ. ಜಿಂಗ್ ಮ್ಯೂಸಿಕ್, ಹಾರ್ಡಿ ಗೇಮ್ಸ್ ಇತ್ಯಾದಿ ವಿವಿಧ ಹೆಚ್ಚುವರಿ ಉಚಿತ ಸರ್ವಿಸ್ ಸಿಗುತ್ತದೆ.

ಬಿಎಸ್​ಎನ್​ಎಲ್​ನ ಪ್ಲಾನ್​ಗಳಲ್ಲಿ ಗಮನ ಸೆಳೆದ ಇನ್ನೊಂದೆಂದರೆ 365 ದಿನದ ಪ್ಲಾನ್. ಇದರಲ್ಲಿ ದೈನಂದಿನ ಡಾಟಾ ಮಿತಿ ಬದಲು ಒಟ್ಟಾರೆ 600 ಜಿಬಿಯಷ್ಟು ಡಾಟಾವನ್ನು ಕೊಡಲಾಗುತ್ತದೆ. ಇದರ ಬೆಲೆ 1,999 ರೂ ಮಾತ್ರವೇ.

ಇತರ ಪ್ರಮುಖ ಪ್ಲಾನ್​ಗಳಲ್ಲಿ 997 ರೂನದ್ದಿದೆ. 160 ದಿನಗಳ ವ್ಯಾಲಿಡಿಟಿಯ ಈ ಪ್ಲಾನ್​ನಲ್ಲಿ ದಿನಕ್ಕೆ 2ಜಿಬಿ ಡಾಟಾ ಸಿಗುತ್ತದೆ. 599 ರೂ ಪ್ಲಾನ್​ನಲ್ಲಿ ದಿನಕ್ಕೆ 3ಜಿಬಿ ಡಾಟಾ ಸಿಗಲಿದ್ದು, 84 ದಿನ ವ್ಯಾಲಿಡಿಟಿ ಇದೆ.

30 ದಿನಗಳ ವ್ಯಾಲಿಡಿಟಿ ಇರುವ ಡಾಟಾ ಪ್ಲಾನ್ 199 ರೂಗೆ ಸಿಗುತ್ತದೆ.

Ad
Ad
Nk Channel Final 21 09 2023
Ad