ನವದೆಹಲಿ : ಹರಾಜಿನಲ್ಲಿ 5ಜಿ ಸ್ಪೆಕ್ಟ್ರಂ ಅನ್ನು ಖರೀದಿ ಮಾಡಿ ಇನ್ನೂ ಅದನ್ನು ಅಳವಡಿಸದ ಅದಾನಿ ಗ್ರೂಪ್ ಕಂಪನಿಗೆ ಕೇಂದ್ರ ದೂರಸಂಪರ್ಕ ಇಲಾಖೆ ಮತ್ತೊಮ್ಮೆ ನೋಟೀಸ್ ಕೊಟ್ಟಿದೆ. ಭಾರತದಲ್ಲಿ ಕಮರ್ಷಿಯಲ್ ಆಗಿ 5ಜಿ ಸರ್ವಿಸ್ ಅನ್ನು ಇನ್ನೂ ಯಾಕೆ ಜಾರಿಗೆ ತಂದಿಲ್ಲ, ಯಾಕೆ ವಿಳಂಬವಾಯಿತು ಎಂದು ಉತ್ತರ ಕೇಳಿ ಅದಾನಿ ಡಾಟಾ ನೆಟ್ವರ್ಕ್ಸ್ ಲಿ ಕಂಪನಿಗೆ ಇಲಾಖೆ ಈ ನೋಟೀಸ್ ಜಾರಿ ಮಾಡಿದೆ.
ಸ್ಪೆಕ್ಟ್ರಂ ಹರಾಜಿನಲ್ಲಿ ರೂಪಿಸಲಾದ ನಿಯಮಗಳ ಪ್ರಕಾರ 2024ರ ಅಕ್ಟೋಬರ್ 10ರಷ್ಟರಲ್ಲಿ ಕಮರ್ಷಿಯಲ್ 5ಜಿ ನೆಟ್ವರ್ಕ್ ಅನ್ನು ಕಡ್ಡಾಯವಾಗಿ ಅಳವಡಿಸಬೇಕು. ಇಲ್ಲದಿದ್ದರೆ ಸ್ಪೆಕ್ಟ್ರಂ ನೀಡಲಾಗಿದ್ದನ್ನು ಸರ್ಕಾರ ಹಿಂಪಡೆಯುವ ಸಂಭವ ಇರುತ್ತದೆ.
Ad