ಉಡುಪಿ: ಭಟ್ಕಳ ಕಪ್ಪೆ ಚಿಪ್ಪು ದುರಂತ ಪ್ರಕರಣ ನಡೆದಿದ್ದು, ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಮಹಾದೇವಿ ನಾಯ್ಕ್ ಹಾಗೂ ನಾಗರತ್ನ ಈಶ್ವರ ನಾಯ್ಕ್ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಸಚಿವ ಮಂಕಾಳ್ ವೈದ್ಯ ಭೇಟಿ ನೀಡಿದರು.
ಗಾಯಾಳುಗಳ ಆರೋಗ್ಯವನ್ನು ಸಚಿವರು ವಿಚಾರಿಸಿದರು. ಇಬ್ಬರ ಆರೋಗ್ಯದಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲವೆಂದು ವೈದ್ಯರು ಮಾಹಿತಿ ನೀಡಿದರು. ಸರ್ಕಾರದಿಂದ ಗರಿಷ್ಠ ಸಹಾಯ ಮಾಡುವ ಭರವಸೆಯನ್ನು ಸಚಿವ ಮಂಕಾಳ್ ವೈದ್ಯ ನೀಡಿದರು.

